
’ಈ ಜಗಾ... ಅಪ್ಪಾ, ಅಮ್ಮನ ಮಗ, ಅಮನೊಳಗೆ ಅಪ್ಪನ ಮೊಗ, ಅಪ್ಪನ ಕತ್ತಿಗೆ ಅಮ್ಮನ ನೊಗ, ನಾ ಅವರ... ಕಂದ.... ಶ್ರೀ...’ ಮೊಬೈಲ್ ರಿಂಗಾಯ್ತು...
ಹಲೋ ! ಹೌದು ನಾನೇ... ಇಂಟರ್ ವ್ಯೂ ಗಾ ? ಬನ್ನಿ... ಬಂದಿದೀರಾ ! ಬನ್ನಿ ಒಳಗೆ... ಇಲ್ಲೇ ಇದೀನಿ.
ಆಕಾರವೊಂದರ ಆಗಮನ.
ಬನ್ನಿ ! ಕೂತ್ಕೊಳ್ಳಿ
ನಮಸ್ಕಾರ ಸಾರ್, ನಮ್ ಪತ್ರಿಕೆಗೆ ನಿಮ್ಮದೊಂದು ಸಂದರ್ಶನ ಬೇಕಾಗಿತ್ತು, ಹೆಚ್ಚು ಸಮಯ ತೊಗೊಳ್ಳೋದಿಲ್ಲಾ
ಪರವಾಗಿಲ್ಲಾ... ಕಡಿಮೆ ತಿಳಕೊಂಡ್ ಹೆಚ್ಚು ಬರೆಯೋ ಜಾಣರು ನೀವು ಅಂತ ಗೊತ್ತು ನಂಗೆ, ಕೇಳಿ
ಸಾರ್, ನೀವು ಈ ಬಿಸಿನೆಸ್ಗೆ ಬಂದು ಯಾವಾಗ ಬಂದ್ರಿ ?
ಈಗ ಒಂದೈದು ವರ್ಷದ ಹಿಂದೆ,,, ತುಂಬಾ ಚಿಕ್ಕದಾಗಿ ಶುರು ಮಾಡಿದ್ದು... ಈವತ್ತಿನ ಟರ್ನ್ ಓವರ್ ಕೋಟಿಗಳಲ್ಲಿದೆ
ಸಾರ್-ನಿಮ್ಗೆ ಈ ಬೇರೆಯವರ ಮುಖಾನ ಕೊಂಡು-ಮಾರೋ ಐಡಿಯಾ ಹೊಳೆದಿದ್ದಾದ್ರೂ ಹೇಗೆ ?
ನೋಡಿ, ತುಂಬಾ ಸಿಂಪಲ್, ಮೂಗು-ಕಣ್ಣು-ಹುಬ್ಬು-ಹಲ್ಲು ಎಲ್ಲಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳೋ ಬದಲು ಹೀಗೆ ನಮ್ ಹತ್ರ ತೊಗೊಂಡ್ರೆ ಅವರಿಗೆ ಚೀಪ್ ಆಗಿ ವರ್ಕ ಔಟ್ ಆಗತ್ತೆ ಅನಿಸಿ ಶುರುಮಾಡ್ದೆ
ನೀವು ಕೊಂಡುಕೊಳ್ಳುವಾಗ ಏನೇನೂ ನೋಡಿ ಕೊಳ್ತೀರಾ ಸಾರ್ ?
ಸಾಮಾನ್ಯವಾಗಿ ವ್ಯಕ್ತಿಯ ಹಿನ್ನೆಲೆ ನೋಡ್ತೀವಿ... ಅವನ ವೃತ್ತಿ, ಅಭ್ಯಾಸ-ಹವ್ಯಾಸ ಎಲ್ಲಾ ನೋಡಿ ಡಿಸೈಡ್ ಮಾಡ್ತೀವಿ... ಸದಾ ಹಸನ್ಮುಖಿಯಾಗಿರೋ ಮುಖಗಳಿಗೆ ಡಿಮ್ಯಾಂಡ್ ಜಾಸ್ತಿ... ಪರ್ಸನಾಲಿಟಿ ಡೆವಲಪ್ಮೆಂಟ್ನವರು, ಎಚ್ಚಾರ್ ಗಳು, ಸೇಲ್ಸ್ನವರು ಬಂದು ಕೊಂಡ್ಕೋತಾರೆ
ಓ, ಓಕೆ ! ಸಾರ್ ನಿಮಗೆ ಇವರುಗಳೇನಾ ಕಷ್ಟಮರ್ಸ್ ?
ಇವರಷ್ಟೇ ಅಲ್ಲಾ, ಎಲೆಕ್ಷನ್ ಟೈಮಲ್ಲಿ ರಾಜಕಾರಣಿಗಳು ಬಂದು ಎಷ್ಟಾದ್ರೂ ಕೊಟ್ಟು ತಗೊಂಡ್ ಹೋಗ್ತಾರೆ. ಅವರುಗಳದು ತುಂಬಾನೇ ಡ್ಯಾಮೇಜ್ ಆಗಿರತ್ತೆ ನೋಡಿ... ಅದಿಕ್ಕೆ ! ಮೊದಲೆಲ್ಲಾ ಬಂದು ಸ್ವಾಮೀಜಿಗಳ ಶಾಂತ ಮುಖಾನೇ ಕೊಡಿ ಅಂತ ದುಂಬಾಲು ಬೀಳ್ತಿದ್ರೂ... ’ನಿತ್ಯಾನಂದ ಪ್ರಕರಣ’ ಆದ್ಮೇಲೆ ಬಿಟ್ಟಿದಾರೆ.
ಇದೆಲ್ಲಾ ಮಾಡೋಕೆ ನಿಮ್ ನೆಟ್ ವರ್ಕ್ ಏನು ?
ನಮ್ಮದು ಬೆಂಗಳೂರಿನ ಎಲ್ಲಾ ದೊಡ್ಡ ದೊಡ್ಡ ಜ್ಯೋತಿಷ್ಯ ಹೇಳೋವರ ಜೊತೆ ಟೈ ಅಪ್ ಇದೆ, ಈಗ ಹಾಸ್ಪಿಟಲ್ಗಳಿಗೆ ಮತ್ತು ಲ್ಯಾಬೋರೆಟರಿಗಳಿಗೆ ಕಮಿಷನ್ ಬೇಸಿಸ್ ಮೇಲೆ ಅಂಡರ್ಸ್ಟಾಂಡಿಂಗ್ ಇರತ್ತಲ್ಲಾ... ಹಂಗೆ, ಅವ್ರೂ ನಮಗೆ ರೆಫರೆನ್ಸ್ ಕೊಡ್ತಾರೆ... ಹೆಣ್ಣು ಮಕ್ಕಳ ಪೋಷಕರು ತಮ್ಮ ಮಕ್ಳಿಗೆ ಸಾಫ್ಟ್ವೇರ್ ಮುಖಗಳೇ ಬೇಕು ? ಅಂದಾಗ ಇಲ್ಲಿಗೆ ಬರ್ತಾರೆ
ನಿಜವಾಗ್ಲೂ ಇನ್ನೊಬ್ಬರ ಮುಖಾನ ನಾವು ಉಪಯೋಗಿಸಬಹುದಾ ?
ಖಂಡಿತಾ, ಈಗ ನಿಮ್ಮ ಮುಖಾನೇ ತೊಗೋಳ್ಳಿ... ನಿಮ್ಮ ಮುಖಾ ನಿಮ್ಮ ಎಡಿಟರ್ ಮುಖಾದ ಹಾಗೇ ಕಾಣೋಲ್ವಾ ಎಷ್ಟೋ ಸಲ.. ಹಾಗೆ, ಅದೂ ಅಲ್ದೆ ನಾನು ಬೆಸಿಕಲ್ಲಿ ನಾನು ಥಿಯೇಟರ್ ಪರ್ಸನ್ನೂ... ಹೆಚ್ಚು-ಕಮ್ಮಿಯಾಗಿದ್ರೆ ’ನೋಸ್ ಕಟ್ಟೋ/ಲಿಪ್ ಕಟ್ಟೋ’ ಮಾಡಿ ಅಡ್ಜಸ್ಟ್ ಮಾಡಿ ಬಿಡ್ತೀನಿ... ಅದು ’ಹೆಂಗೆ ?’ ಅಂತ ಮಾತ್ರ ಕೇಳ್ಬೇಡಿ, ಅದು ಬಿಸಿನೆಸ್ ಸೀಕ್ರೇಟ್
ಸರಿ ! ನಿಮ್ಮ ಈ ಕೆಲಸಕ್ಕೆ ಮನೆಯವರ ಬೆಂಬಲ ಇದ್ಯಾ ?
ಯಾವ ಹೊಸ ವಿಚಾರಕ್ಕೆ ಯಾರ ಮನೆಯಲ್ಲಿ ಬೆಂಬಲ ಕೊಡ್ತಾರೆ ಹೇಳಿ ? ಮೊದಲೆಲ್ಲಾ ವಿರೋಧಿಸಿದ್ರೂ... ನಾನು ಯಾವಾಗ ಬೇರೆ ಬೇರೆ ಮುಖ ಹಾಕ್ಕೊಂಡ್ ಹೋಗಿ ತೋರಿಸಿ ಕನ್ವಿನ್ಸ್ ಮಾಡಿದ್ನೋ ಸುಮ್ಮನಾದ್ರು.
ಸರಿ ಸರ್, ತುಂಬಾ ಇನ್ಫರ್ಮೇಷನ್ ಕೊಟ್ರಿ, ಧನ್ಯವಾದಗಳು, ನಾನು ಬರ್ತೀನಿ
ಆಗಲಿ, ನಿಮಗೆನಾದ್ರೂ ಮುಖ ಬೇಕಾದ್ರೆ ಹೇಳಿ ಡಿಸ್ಕೌಂಟ್ ರೇಟ್ನಲ್ಲಿ ಕೊಡೋಣ.

ತುಂಬಾ ಚೆನ್ನಾಗಿದೆ :)
ReplyDeletetumba thanx illkilya :)
ReplyDeletemukavaada bayalaaythu...chennagide
ReplyDelete