'ಊರು ಬಿಡ್ಬೇಕು...'ಹೌದು, ಬೇರೆ ದಾರಿಯಿಲ್ಲ, ಇಲ್ಲಿದ್ರೆ ಕಿತ್ತು ತಿನ್ನೋ ನೆನಪುಗಳಿಂದ ನನಗೆ ಮುಕ್ತಿನೇ ಇಲ್ಲ. ಯಾವ ರಸ್ತೆಗೆ ಹೋದ್ರು ಯಾವತ್ತೋ ಅವ್ಳು ಈ ರಸ್ತೇಲಿ ಓಡಾಡಿದ್ದು ಅನ್ನೋದು ನೆನಪಾಗುತ್ತೆ. ಮನಸ್ಸು ಬೇಡ ಬೇಡವೆಂದರು ಕೇಳದೆ ನೆನಪುಗಳಿಗೆ ಜೋತುಬೀಳತ್ತೆ. ಯಾಕೆ ಸುಮ್ನೇ ಈ ನರಳಿಕೆ. ಒಂದು ಲೆಟರ್ ಬರೆದು ಇಟ್ಕೊಂಡು ಈ ಸರ್ತಿ ಸಿಕ್ಕಾಗ ಕೊಟ್ಟು ಬಿಡಬೇಕು... ಅವಳೇ ನಿರ್ಧಾರ ಮಾಡ್ಲಿ. ಹೌದು ! ಅದೇ ಸರಿ. ಆ ಲೆಟರ್ ನಲ್ಲಿ ಎಲ್ಲ ಬರೆದು ಬಿಡಬೇಕು...
''ನೋಡು ! ನಿನ್ನನ್ನ ಇಷ್ಟ ಪಡೋವ್ರು ಬೇಕಾದಷ್ಟು ಜನಾ ಇರಬಹುದು, ಆದ್ರೆ ನನ್ನಷ್ಟು ಪ್ರೀತಿಸೋವ್ರು , ರೆಸ್ಪೆಕ್ಟ್ ಕೊಡೋರು ಇನ್ಯಾರು ಸಿಗೋದಿಲ್ಲ... ನನ್ನ ಪಾಲಿಗೆ ನೀನು ಕೇವಲ ಇಷ್ಟ ಪಟ್ಟ ಹುಡುಗಿಯಲ್ಲ... ನೀನೆ ಗುರಿ.., ನೀನೆ ಗಮ್ಯ.., ನನ್ನ ಪ್ರತಿ ಮುಂಜಾವು ಶುರುವಾಗೋದು ನಿನ್ನ ನೆನಪಿನೊಂದಿಗೆ.. , ನನ್ನ ಒಟ್ಟು ಕನಸುಗಳ ಮೂರ್ತ ರೂಪ ನೀನು... ಅಮ್ಮ ಹಾಕೋ ಕೈ ತುತ್ತು... ನೋಟ್ ಬುಕ್ಕಲ್ಲಿ ಮರಿ ಹಾಕಿಸಲು ಇತ್ತುಕೊಳ್ತಿದ್ದ ಸಾವಿರ ಕಣ್ಣಿನ ನವಿಲು ಗರಿ, ಸಂಜೆ ವೇಳೆ ಸುರಿಯೋ ಅಡ್ಡ ಮಳೆ... ಮಳೆ ಬಿದ್ದಾಗ ಏಳೋ ಮಣ್ಣ ವಾಸನೆ... ನೀನು '
ಮಳೆ'ಯಾದರೆ, ನಾನು '
ಹನಿ'... ನೀನು ಸಮುದ್ರವಾದರೆ... ನಾನು ಮರಳ ದಂಡೆಯ ಮೇಲೆ ಪುಟ್ಟ ಮಕ್ಕಳು ಕಟ್ಟಿದ ಕಪ್ಪೆ ಗೂಡು... ಯಾವಾಗಲೋ ಒಮ್ಮೆ ಇದ್ದಕ್ಕಿಂದಂತೆ ನೆನಪಾಗೋ ಮಧುರ ಹಾಡು... ದೇವಾಸ್ಥಾನದ ದೀಪದ... '' hello, hello...hold on... gimme a break... ಸಣ್ಣ ಹುಡುಗಿ ಅವ್ಳು, ಗಮ್ಯ-ಗುರಿ ಅಂತೆಲ್ಲ ಬರೆದು ಗಾಬರಿ ಮಾಡ್ಬೇಡ, ಅದು ಅಲ್ದೆ ಅವ್ರ ಮನೆ ದೇವರು ಬೇರೆ
ಉಗ್ರ ನರಸಿಂಹ... ಗೊತ್ತಲ್ಲ ! easyಯಾಗಿ ಅರ್ಥ ಆಗೋ ಹಾಗೆ ಬರಿ '' ಅಂತ order ಮಾಡ್ತು ನನ್ನ ಮನಸ್ಸು. ಸರಿ ಅನ್ನಿಸಿ ಸರಳವಾಗಿ ಬರೆಯೋಕೆ ಕೂತೆ. ಸುಮ್ನೆ ಯಾಕೆ ಸುತ್ತಿ ಬಳಸಿ ಬರೆಯೋದು. ನೇರವಾಗಿ ಮೂರೂ-ಮತ್ತೊಂದು ಪ್ರಶ್ನೆ ಕೇಳಿ openion ತಗೊಂಡ್ರೆ ಆಯ್ತು. ನಮ್ಮ ad-mediaದಲ್ಲಿ ಇದನ್ನೇ ತಾನೇ ಮಾಡೋದು -
KISS (Keep it short & sweet). ಹಾಗೆ ಬರೆದು ಕೇಳಿದ್ರೆ ಆಯಿತು ಅಂತ ಈ ಕೆಳಗಿನ ಪ್ರಶ್ನೆಗಳನ್ನು ಬರೆದು ಇಟ್ಟುಕೊಂಡೆ. ... ಇದಾಗಿ ಮೂರೂ ದಿನ ಆದ್ರೂ ಅವ್ಳು ಸಿಕ್ಕಲಿಲ್ಲ... ಜೇಬಲ್ಲಿ ಬೆಂಕಿ ಇಟ್ಟುಕೊಂಡ feeling ನಂಗೆ. ಕಡೆಗೆ as usual ಗಾಂಧೀ ಬಜಾರ್ನಲ್ಲಿ ಸಿಕ್ಕಾಗ ನಿಲ್ಲಿಸಿ-ಮಾತಾಡಿ ಲೆಟರ್ ಕೊಟ್ಟೆ. ಓದಿ ಆಮೇಲೆ ಯೋಚಿಸಿ ಬರೆದು ಕೊಡೋದಾಗಿ ಹೇಳಿ ತೊಗೊಂಡು ಹೋದಳು. ಅವ್ಳು ಆ letterಗೆ ಉತ್ತರ ಬರೆದು ಕಲಿಸೋ ಅಷ್ಟರಲ್ಲಿ ನನಗೆ ಸಾಕು ಸಾಕಾಗಿ ಹೋಗಿತ್ತು. ಕಡೆಗೂ ಅವ್ಳು ಉತ್ತರ ಕೊಟ್ಳು !
ಅದು...
1) ಇಷ್ಟು ದಿನಗಳ interaction ನಲ್ಲಿ ಒಂದು ದಿನ, atleast ಒಂದು ಕ್ಷಣನು ನನ್ನ ಮೇಲೆ ಪ್ರೀತಿ ಹುಟ್ಟಲಿಲ್ವಾ ?
ಇಲ್ಲಾ
2) ನಾನು ನಿನಗೆ ಸಿಗದೇ ಇದ್ದಾಗಲೂ ನೀನು ಸುಖಾವಾಗಿ ಇರ್ತ್ಯಾ ?
ಇರಬಲ್ಲೆ
3) suppose... suppose ನಾನು ನಿಮ್ಮ ತಂದೆ-ತಾಯಿನಾ ಈ ಮದ್ವೆಗೆ ಒಪ್ಪಿಸಿದರೆ ನೀನು ನನ್ನ ಸಂಗಾತಿಯಾಗಿ ಇರ್ತ್ಯಾ ?
ಇಲ್ಲಾ
4) ನಿನ್ನ ಪ್ರೀತಿಗೆ ನಾನು ಅರ್ಹನಲ್ಲ ಅಂತ ನಿನಗೆ ನಿಜಕ್ಕೂ ಅನ್ಸಿದ್ರೆ ನನ್ನ ನೆನಪು ಮಾಡಿಕೊಳ್ದೆ ಇರ್ತ್ಯಾ ?
ಇರ್ತಿನಿ
ಇದನ್ನು ಓದಿ ನೀವು ಅವ್ಳು-ಅವ್ನಿಗೆ ಸಿಗೋಲ್ಲ ಅಂತ easyಯಾಗಿ ತಿರ್ಮಾನಕ್ಕೆ ಬಂದು ಬಿಡ್ತೀರಿ. ಅದು ನಿಮಗೆ ಸುಲಭ ಕೂಡ. ಆದ್ರೆ ಪ್ರೀತಿಸ್ತಾ ಇರೋದು ನಾನು ನೋಡಿ ಹಾಗಾಗಿ ಈ ದೇಹ ಸತ್ತು ಮಣ್ಣಿಗೆ ಸೇರೋವರೆಗೆ ಪ್ರೀತಿಸ್ತಾನೆ ಇರೋದು ಅನಿವಾರ್ಯ. ಅದು ಅಲ್ದೆ ಎಷ್ಟೆಲ್ಲಾ management training attend ಮಾಡಿದೀನಿ. Life ಬಗ್ಗೆ ಎಷ್ಟೆಲ್ಲಾ postive ಆಗಿ ಇದ್ದೀನಿ. ಅದು ಅಲ್ದೆ ಅವ್ಳು ಬರೆದು ಕೊಟ್ಟಿರೋದನ್ನಾ ಸ್ವಲ್ಪ detail ಆಗಿ ಓದಿ ನೋಡಿ..... ಹಾಗಲ್ಲಾ.. ನೀವು ತಪ್ಪು ತಪ್ಪಾಗಿ ಓದ್ತಾ ಇದೀರಾ.. ನೀವು 'ಮೇಲಿನಿಂದ-ಕೆಳಕ್ಕೆ' ಓದ್ತಾ ಇದೀರಾ.... ಅದೇ 'ಕೆಳಗಿನಿಂದ-ಮೇಲಕ್ಕೆ' ಒಮ್ಮೆ ಓದಿಕೊಂಡು ಹೋಗಿ !
... ನಿಜವಾದ ಪ್ರೀತಿ ಅಂದ್ರೆ ಇದು.. wish me good luck ! ಕಾಯ್ತೀನಿ ಅವ್ಳು ಸಿಗೋವರೆಗೂ..., after all ಇನ್ನು ಬದುಕಿರೋದಾದ್ರು ಎಷ್ಟು ವರ್ಷಾ ?
ಅಂದ್ಹಾಗೆ! ಬೆಂಗಳೂರಲ್ಲಿ ಸೈಟ್ ರೇಟುಗಳು ಕಮ್ಮಿಯಾಗಿದೆಯಂತೆ ಹೌದಾ !